Skip to main content
x

3. ಶ್ರೀಸಂಭವತೀರ್ಥರು
3. Shri Sambhava Teertha

ಪರಂಪರೆಯಲ್ಲಿ 3ನೆಯ ಯತಿಗಳು ಶ್ರೀಸಂಭವತೀರ್ಥರು. ಈ ಹೆಸರೂ ಕೂಡಾ ಸಹಸ್ರನಾಮದ್ದೇ. ಸಂಭವ ಅಂದರೆ ಧರ್ಮದ ಸ್ಥಾಪನೆಗಾಗಿ ಭೂಮಿಯಲ್ಲಿ ಅವತರಿಸಿ ಬರುವವನು ಎಂದು. ಶ್ರೀಸಮಾತ್ಮೇಶತೀರ್ಥರು ಈ ಅರ್ಥಾನುಸಂಧಾನವನ್ನಿಟ್ಟುಕೊಂಡೇ ತನ್ನ ಶಿಷ್ಯನಿಗೆ ಈ ಹೆಸರನ್ನಿಟ್ಟಿರಬೇಕು. ಯಾಕೆಂದರೆ ಸನ್ಯಾಸಿಗಳಿಗೆ ಮುಖ್ಯ ಕರ್ತವ್ಯವೇ ಧರ್ಮದ ಸ್ಥಾಪನೆ. ತತ್ವಪ್ರಚಾರ. ಹಾಗಾಗಿ ತನ್ನ ಶಿಷ್ಯನು ಕೂಡಾ ಈ ರೀತಿಯಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಸಂಭವ ಎಂಬ  ಹೆಸರನ್ನಿಟ್ಟು ಅನುಗ್ರಹಿಸಿದರು. ಶ್ರೀಸಂಭವತೀರ್ಥರೂ ಕೂಡಾ ಸಚ್ಛಾಸ್ತ್ರ ಪಾಠ-ಪ್ರವಚನ ಹಾಗೂ ಭಗವಂತನ ನಿರಂತರ ಉಪಾಸನೆಯ ಮೂಲಕ ಸಾರ್ಥಕ ಜೀವನ ನಡೆಸಿದರು.  ತಮ್ಮ ಗುರುಗಳ ನಂತರ ಹದಿನೇಳು ವರ್ಷಗಳ ಕಾಲ ಪಲಿಮಾರು ಮಠದ ಪೀಠವನ್ನು ಅಲಂಕರಿಸಿದರು. ಕೊನೆಗೆ ಶುಕ್ಲಸಂವತ್ಸರದ ವೈಶಾಖ ಶುದ್ಧ ಪಂಚಮಿಯಂದು ಅಯೋಧ್ಯೆಯಲ್ಲಿ ಶ್ರೀರಾಮನ ಪಾದವನ್ನು ಸೇರಿದರು.

The third seer in the lineage is Shri Sambhava Teertha. This name too is one among the thousand names of the Lord. Sambhava means one who incarnates on earth to establish righteousness. Bearing this meaning in mind, Shri Samatmesha Teertha must have named his disciple because the primary duty of an ascetic is establishment of righteousness and promoting the philosophy. Intending his disciple too to grow in this way, he named him Sambhava and blessed him. Shri Sambhava Teertha too lead a meaningful life by conducting lessons and giving discourses on the scrpitures and unrelenting worship of the Lord. After his guru, he adorned the peeta of Palimaru Matha for 17 years. Finally, in Shukla samvatsara, vaishakha shuddha panchami he attained the lotus feet of Shri Rama at Ayodhya.