Skip to main content
x

10. ಶ್ರೀಜಗದ್ಭೂಷಣ ತೀರ್ಥರು

10. Shri Jagadbhushana Teertharu

ಶ್ರೀವಲ್ಲಭತೀರ್ಥರ ಅನಂತರದಲ್ಲಿ ಪಲಿಮಾರು ಮಠದ ಅಧಿಪತಿಗಳಾಗಿದ್ದವರು ಶ್ರೀಜಗದ್ಭೂಷಣತೀರ್ಥರು. ಹತ್ತನೆಯ ಯತಿಗಳಾದ ಇವರು ಸಕಲತೀರ್ಥಕ್ಷೇತ್ರಗಳನ್ನು ಸಂದರ್ಶನ ಮಾಡಿದವರು.ಭಕ್ತಿಪ್ರಸಾರವನ್ನು ಮಾಡುತ್ತಾ ಸಾರ್ಥಕಜೀವನವನ್ನು ನಡೆಸಿದವರು. ಹತ್ತುವರ್ಷಗಳ ಕಾಲ ಮಠದ ಆಡಳಿತವನ್ನು ನಡೆಸಿದವರು. ತನ್ನ ಕೊನೆಯ ಕಾಲದಲ್ಲೂ ತೀರ್ಥ-ಕ್ಷೇತ್ರಗಳ ಸಂದರ್ಶನವನ್ನು ಬಿಡಲಿಲ್ಲ. ಹೀಗೆ ಯಾತ್ರೆಯ ಸಂದರ್ಭದಲ್ಲಿಯೇ ತಿರುಪತಿಯ ಪರಬ್ರಹ್ಮ ಶ್ರೀನಿವಾಸನ ಸನ್ನಿಧಾನದಲ್ಲಿ ತನ್ನ ಇಹಲೋಕದ ಸಾಧನೆಗಳನ್ನು ಕೃಷ್ಣಾರ್ಪಣಗೊಳಿಸಿ ಹರಿಪಾದವನ್ನು ಸೇರಿದರು. ಶಾಲಿವಾಹನಶಕ ೧೪೦೬ (ಕ್ರಿ.ಶ-೧೪೮೪) ಶೋಭನ ಸಂವತ್ಸರದ ಚೈತ್ರ ಶುದ್ಧ ದ್ವಾದಶೀ ಶ್ರೀಜಗದ್ಭೂಷಣ ತೀರ್ಥ ಶ್ರೀಪಾದಂಗಳವರ ಆರಾಧನಾ.

Succeeding Shri Vallabha Teertha as adhipati of Palimaru Matha was Shri Jagadbhushana Teertha. As the tenth seer, he visited all the sacred places. Spreading devotion. he lead a fulfilling life. He administered the matha for 10 years. Even during his final days, he did not forego visiting holy places. While on a pilgrimage, at the vicinity of Lord Srinivasa of Tirupati, submitting his earthly accomplishments to Lord Krishna, he attained haripada. In Shalivahana shaka 1406 (1484 A.D.) Shobana samvatsara chaitra shuddha dwadashi is the aradhana of His Holiness Shri Jagadbhushana Teertha.