೨. ಶ್ರೀಹೃಷೀಕೇಶತೀರ್ಥರು
2. Shri Hrishikesha Teertha
ಶ್ರೀಮದಾನಂದತೀರ್ಥಭಗವತ್ಪಾದರ ಸಾಕ್ಷಾತ್ ಶಿಷ್ಯರಾದ ಶ್ರೀಶ್ರೀಹೃಷೀಕೇಶತೀರ್ಥರು ಪಲಿಮಾರುಮಠದ ಮೂಲಯತಿಗಳು. ಇವರು ಆಚಾರ್ಯರ ಸನ್ಯಾಸಿಶಿಷ್ಯರುಗಳಲ್ಲಿಯೇ ಜ್ಯೇಷ್ಠರು. ಇದನ್ನು ನಾರಾಯಣಪಂಡಿತಾಚಾರ್ಯರು ಮಧ್ವವಿಜಯದಲ್ಲಿ ದಾಖಲೆ ಮಾಡುತ್ತಾರೆ. ನಿಜಶಿಷ್ಯಪ್ರವರರು ಎಂಬುದಾಗಿ. ನಿಜ ಶಿಷ್ಯಪ್ರವರೇಣ ಹೃಷೀಕೇಶತೀರ್ಥೇನ ಎಂಬುದಾಗಿ ಪಂಡಿತಾಚಾರ್ಯರೇ ತಮ್ಮ ಭಾವಪ್ರಕಾಶಿಕಾ ಟೀಕೆಯಲ್ಲಿ ಹೇಳುತ್ತಾರೆ. ಇದರಿಂದ ಹೃಷೀಕೇಶತೀರ್ಥರು ಹಿರಿಯ ಸನ್ಯಾಸಿಗಳು ಎಂಬುದಾಗಿ ತಿಳಿಯುತ್ತದೆ.
ನಾರಾಯಣಪಂಡಿತಾಚಾರ್ಯರು ಹೃಷೀಕೇಶತೀರ್ಥರ ಬಗ್ಗೆ ಹೇಳುವಾಗ ವಶೀಕೃತಹೃಷೀಕಾಶ್ಚ ಎಂಬುದಾಗಿ ಹೇಳುತ್ತಾರೆ. ಹೃಷೀಕಾಃ ಅಂದರೆ ಇಂದ್ರಿಯಗಳು. ಅವುಗಳನ್ನು ವಶಪಡಿಸಿಕೊಂಡವರು ಎಂದರ್ಥ. ಇಂದ್ರಿಯನಿಗ್ರಹ ಎನ್ನುವುದು ಪ್ರತಿಯೊಬ್ಬನಿಗೂ ಇರಬೇಕಾದ ಅಂಶ. ಅದರಲ್ಲೂ ಯತಿಗಳಿಗೆ ವಿಶೇಷವಾಗಿ ಇರಲೇಬೇಕು. ಹೃಷೀಕೇಶತೀರ್ಥರು ಇಂದ್ರಿಯಜಯವನ್ನು ಸಂಪಾದನೆ ಮಾಡಿದವರಾದ್ದರಿಂದ ಅವರಿಗೆ ಆಚಾರ್ಯರು ಮಾಡಿದ ನಾಮಕರಣ ಅನ್ವರ್ಥವಾಗಿತ್ತು. ಆಚಾರ್ಯರ ಎಲ್ಲಾ ಶಿಷ್ಯರುಗಳೂ ಕೂಡಾ ಹೀಗೆಯೇ ಇಂದ್ರಿಯನಿಗ್ರಹವುಳ್ಳವರಾಗಿದ್ದರು ಎಂಬುದಾಗಿಯೂ ನಾವು ತಿಳಿದುಕೊಳ್ಳಬೇಕು.
ಹೃಷೀಕೇಶತೀರ್ಥರ ವೈಶಿಷ್ಟ್ಯವನ್ನು ಮಧ್ವವಿಜಯ ಹೀಗೆ ದಾಖಲೆ ಮಾಡುತ್ತದೆ.
ಅವದತ್ ಸ ಕಥಾಂ ರಥಾಂಗಪಾಣೇಃ
ಭಗವಾನ್ ಭಾಗವತೇ ಭವಾಪಹಂತ್ರೀಮ್ |
ಅನುಕೂಲಗುಣಸ್ವರಾದಿಭಾಜಾ
ನಿಜಶಿಷ್ಯಪ್ರವರೇಣ ವಾಚ್ಯಮಾನೇ ||
ಶ್ರೀಮದಾನಂದತೀರ್ಥಭಗವತ್ಪಾದರು ಸಂಸಾರರೋಗವನ್ನು ಪರಿಹರಿಸುವ ರಥಾಂಗಪಾಣಿಯ ಮಹಿಮೆಯನ್ನು ಸಾರುವ ಭಾಗವತ ಪ್ರವಚನ ಮಾಡಲು ಗುರುಗಳ ಕಂಠಕ್ಕೆ ಹೊಂದುವ ಗಾಂಭೀರ್ಯ, ಶ್ರಾವ್ಯತ್ವ ಮೊದಲಾದ ಗುಣಗಳನ್ನು, ಸ್ವರಾನುಕರಣವನ್ನು ಹೊಂದಿದ ಶ್ರೀಹೃಷೀಕೇಶತೀರ್ಥರು ಭಾಗವತಶ್ಲೋಕವನ್ನು ಸುಶ್ರಾವ್ಯವಾಗಿ ಹಾಡುತ್ತಾ ಇದ್ದರು.
ಶ್ರೀಹೃಷೀಕೇಶತೀರ್ಥರ ವಾಚನ, ಶೀಮದಾಚಾರ್ಯರ ಪ್ರವಚನ, ಹೀಗೆ ಆಚಾರ್ಯರ ಜೊತೆ ವಾಚನ ಮಾಡುವ ಮಹಾಸೌಭಾಗ್ಯವನ್ನು ಹೊಂದಿದವರು ಶ್ರೀಹೃಷೀಕೇಶತೀರ್ಥರು. ಶ್ರೀಮಧ್ವಾಚಾರ್ಯರು ಇವರ ಉಪಾಸನೆಗಾಗಿ ಶ್ರೀಲಕ್ಷ್ಮಣ, ಆಂಜನೇಯ, ಸೀತಾ-ರಾಮಚಂದ್ರದೇವರ ಅತ್ಯಂತ ಸುಂದರವಾದ ವಿಗ್ರಹಗಳನ್ನು ನೀಡಿ ಅನುಗ್ರಹಿಸಿದರು.
ಏಳು ಶತಮಾನಗಳ ಪರಂಪರೆಯಿಂದ ಪೂಜಿಸಿಕೊಂಡು ಬಂದಿರುವ ಆ ಪ್ರತಿಮೆಗಳನ್ನು ಇಂದಿಗೂ ನಾವು ನೋಡಬಹುದಾಗಿದೆ. ಅದರಲ್ಲಿ ಶ್ರೀರಾಮನ ಪ್ರತಿಮೆಯಂತೂ ವರ್ಣಿಸಲಸಾಧ್ಯವಾದ ಸೌಂದರ್ಯವನ್ನು ಹೊಂದಿರುವಂತದ್ದು. ಮಂದಹಾಸದಿಂದ ಯುಕ್ತವಾದ ಮುಖಕಮಲ ನೋಡಲು ಎರಡು ಕಣ್ಣುಗಳು ಸಾಲದು. ರಾಮನ ಪ್ರತಿಮೆಯ ಸೌಂದರ್ಯವೇ ಇಷ್ಟು ಆಕರ್ಷಣೀಯವಾಗಿದೆ. ರಾಮಚಂದ್ರನ ನಿಜವಾದ ಆ ಮುಖಕಮಲ ಸಂಸಾರ ಬೇಗೆಯನ್ನು ಪರಿಹರಿಸುವುದರಲ್ಲಿ ಸಮರ್ಥವೇ ಆಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಚಾರ್ಯರ ಕರಸ್ಪರ್ಶದಿಂದ ಪೂರ್ಣಸನ್ನಿಧಾನವನ್ನು ಹೊಂದಿರುವ ಪರಿವಾರಸಮೇತನಾದ ರಾಮಚಂದ್ರ ಪಲಿಮಾರು ಮಠದ ಪಟ್ಟದ ದೇವರಾಗಿ ಇಂದಿಗೂ ಭಕ್ತರನ್ನು ಅನುಗ್ರಹಿಸುತ್ತಿದ್ದಾನೆ.
ಶ್ರೀಹೃಷೀಕೇಶತೀರ್ಥರು ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳನ್ನು ತಮ್ಮ ಕೈಗಳಿಂದ ಬರೆದು ರಕ್ಷಣೆ ಮಾಡಿದ ಮಹಾತ್ಮರು. ಅವರು ಬರೆದ ತಾಳವಾಡೆಗಳನ್ನು ಇಂದಿಗೂ ಪಲಿಮಾರುಮಠದಲ್ಲಿ ನಾವು ಕಾಣಬಹುದು. ೮೦೦ವರ್ಷಗಳ ಹಿಂದಿನ ಹಸ್ತಪ್ರತಿಗಳನ್ನು ರಕ್ಷಿಸಿದ ಕೀರ್ತಿ ಪಲಿಮಾರುಮಠಕ್ಕೆ ಸಲ್ಲುವಂತದ್ದು. ಆಚಾರ್ಯರ ನೇರಶಿಷ್ಯರಾದ ಶ್ರೀಹೃಷೀಕೇಶತೀರ್ಥರು ಬರೆದ ಈ ಪಾಠವು ನಮ್ಮೆಲ್ಲರಿಗೆ ಪರಮಪ್ರಮಾಣ.
ಹೀಗೆ ತಮ್ಮ ಜೀವಿತಾವಧಿಯಲ್ಲಿ ಅನೇಕ ಸಾಧನೆಗಳನ್ನು ಗೈದ ಶ್ರೀಹೃಷೀಕೇಶತೀರ್ಥರು ವಿರೋಧಿಸಂವತ್ಸರದ ಮಾಘಶುದ್ಧಸಪ್ತಮೀಯಂದು (ರಥಸಪ್ತಮಿ) ಪ್ರಯಾಗದಲ್ಲಿ ಮಾಧವನನ್ನು ಧ್ಯಾನಿಸುತ್ತಾ ತಮ್ಮ ಇಹಲೋಕದ ಯಾತ್ರೆಯನ್ನು ಪೂರ್ಣಗೊಳಿಸಿದರು. ಇದರ ಬಗ್ಗೆ ಮಠದಲ್ಲಿಯೇ ಲಬ್ಧವಾದ ಮಾಹಿತಿ.
ವಿರೋಧಿಮಾಘಾರ್ಜುನಸಪ್ತಮೀತಿಥೌ
ವರೋ ಹೃಷೀಕೇಶಮುನಿಸ್ತಪಸ್ವಿನಾಮ್|
ಪುರುಪ್ರಬೋಧಾರ್ಯಕರಾಬ್ಜಸಂಭವೋ
ಧರಾಸುತೇಶಾಂಘ್ರಿಸರೋಜಮೇಯಿವಾನ್ ||
The direct disciple of Shrimad Ananda Teertha Bhagavadpaada, Shri Shri Hrishikesha Teertha is the first seer of Palimaru Matha. He is the senior most among the ascetic disciples of Acharya. This has been documented by Narayana Panditacharya in Madhva Vijaya. He is called as a distinguished disciple. Panditacharya in his commentary on Bhavaprakaashika states ' Nija śiṣyapravarēṇa hr̥ṣīkēśatīrthēna'. Through this, we infer that Hrishikesha Teertha is a senior ascetic.
While Narayana Panditacharya speaks of Hrishikesha Teertha, he refers to him as vaśīkr̥tahr̥ṣīkāśca. Hr̥ṣīkā means senses; one who has gained control over them. Abstinence is a virtue that every individual should posess. This is more so in the case of ascetics. Since Hrishikesha Teertha had gained absolute control over his senses, him being named thus by Acharya was most appropriate. We also need to know that all of Acharya's disciples had restraint over their senses.
The distinction of Hrishikesha Teertha is documented thus in Madhva Vijaya.
Avadat sa kathāṁ rathāṅgapāṇēḥ
bhagavān bhāgavatē bhavāpahantrīm |
anukūlaguṇasvarādibhājā
nijaśiṣyapravarēṇa vācyamānē ||
When Shrimad Ananda Teertha Bhagavpaada gave discourses on Bhagavata that enunciates the glories of Rathaangapaani and serves as a remedy for the troubles of samsaaraa, Shri Hrishikesha Teertha used to sing the Bhagavata verses in a pleasing manner to match the profoundity, eminence and such other attributes in the tone of his guru.
The recital of Hrishikesha Teertha and the discourse of Shrimad Acharya - thus, Shri Hrishikesha Teertha was immensely fortunate to render recital alongside the discourse of Acharya. Shri Madhvacharya bestowed his grace upon him by giving him immensely beautiful idols of Lord Ramachandra, Sita, Aanjaneya and Shri Lakshmana for his worship.
Being worshipped by the lineage since seven centuries, we can see those idols to date. Of those, the beauty of the idol of Shri Rama is beyond description. Two eyes are not enough to behold the beauty of his lotus face adorning a smile. The beauty of the idol of Lord Rama is extremely alluring. There is no second word that the lotus face of Ramachandra is capable of fending away the fervour of samsaaraa. The idols which have the complete presence of Lord Ramachandra along with his family owing to the touch of Acharya, is the primary deity of Palimaru Matha, bestowing grace upon devotees even today.
Shri Hrishikesha Teertha is the eminent seer who has scripted Shrimadhacharya's Sarvamoola Granthas with his hands and preserved them. We can still see the palm leaf manuscripts written by him at Palimaru Matha. Palimaru Matha must be credited for preserving these hand written leaflets dated 800 years. This lesson written by Shri Hrishikesha Teertha, a direct disciple of Acharya serves as the primary document for all of us.
Thus having undertaken several meritorious deeds during his lifetime, in Virodhi samvatsara, maagha shuddha saptami (Rrathasaptami) meditating upon Maadhava at Prayaga, Shri Hrishikesha Teertha completed his wordly journey. Information pertaining to this is recorded at the matha as below:
Virōdhimāghārjunasaptamītithau
varō hr̥ṣīkēśamunistapasvinām|
puruprabōdhāryakarābjasambhavō
dharāsutēśāṅghrisarōjamēyivān ||
---------------------------------------------------------------------------------------------------------------
Picture of Acharya Madhwa and Sri Hrishikesha Teertharu : www.shivallibrahmins.com