Skip to main content
x

12. ಶ್ರೀ ವಿದ್ಯಾನಿಧಿತೀರ್ಥರು

12. Shri Vidyanidhi Teertharu

ಶ್ರೀಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ಹೃಷೀಕೇಶತೀರ್ಥ ಶ್ರೀಪಾದಂಗಳವರ ಭವ್ಯಪರಂಪರೆಯನ್ನು ಬೆಳಗಿದ ಪಲಿಮಾರುಮಠದ ಹನ್ನೆರಡನೆಯ ಯತಿಗಳು ಶ್ರೀವಿದ್ಯಾನಿಧಿತೀರ್ಥ ಶ್ರೀಪಾದರು. ಇವರು ಹೆಸರಿಗೆ ತಕ್ಕಂತೆ ಪರವಿದ್ಯೆಯ ನಿಧಿಯೇ ಆಗಿದ್ದರು. ಆದ್ದರಿಂದಲೇ ಹೆಚ್ಚಿನ ಸಮಯವನ್ನು ಶಾಸ್ತ್ರಾರ್ಥಗಳ ಚಿಂತನೆಯಲ್ಲಿಯೇ ಕಳೆಯುತ್ತಿದ್ದರು. .ಮಹಾವಿಭೂತಿಪುರುಷರಾದ, ಕ್ರಾಂತಿಕಾರಿಗಳಾದ ಶ್ರೀವಾದಿರಾಜಗುರುಸಾರ್ವಭೌಮರ ಸಮಕಾಲೀನರು ಶ್ರೀವಿದ್ಯಾನಿಧಿತೀರ್ಥರು. ಸುಮಾರು ಹನ್ನೆರಡು ವರ್ಷಗಳ ಕಾಲ ಪೀಠವನ್ನಾಳಿದವರು. ಅಷ್ಟೇ ಅಲ್ಲದೇ ರಾಮಚಂದ್ರನ ವಿಶೇಷ ಆರಾಧನೆಯನ್ನು ನಡೆಸಿದವರು. ಶಾಲಿವಾಹನ ಶಕ ೧೪೨೯(ಕ್ರಿ.ಶ-೧೫೧೪) ಶ್ರೀಮುಖಸಂವತ್ಸರದ ವೈಶಾಖಮಾಸದ ಪೂರ್ಣಿಮೆಯಂದು ಪಲಿಮಾರಿನ ಮಠದಲ್ಲಿಯೇ ವೇದವ್ಯಾಸದೇವರ ಪಾದವನ್ನು ಸೇರಿದರು.

The twelth seer in the lineage of the direct disciple of Shri Madhvacharya - Shri Hrishikesha Teertha, who illuminated the the grand tradition of Palimaru Matha is His Holiness Shri Vidyanidhi Teertha. He was a treasure trove of supreme knowledge true to his name. He spent a lot of his time contemplating upon the scriptures Shri Vidyanidhi Teertha is a contemporary of the mighty revolutionary Shri Vadiraja Gurusaarvabhouma. He adorned the peeta for about 12 years. Besides, he was also engaged in the special worship of Lord Ramachandra. In Shalivahana shaka 1429 (1514 A.D.) Shrimukha samvatsara vaishakha poornima, he attained the feet of Lord Vedavyasa at Palimaru Matha.