Skip to main content
x

7. ಶ್ರೀಶ್ರೀನಿಧಿತೀರ್ಥ ಶ್ರೀಪಾದಂಗಳವರು

7. Shri Shrinidhi Teertha Sripadaru

ಪಲಿಮಾರು ಮಠದ ಗುರುಪರಂಪರೆಯಲ್ಲಿ ಏಳನೇಯವರು ಶ್ರೀ ಶ್ರೀನಿಧಿತೀರ್ಥರು. ಇವರು ಶ್ರೀರಾಜರಾಜೇಶ್ವರತೀರ್ಥರ ನಂತರದವರಾದರೂ ಅವರಿಂದ ಆಶ್ರಮ ಪಡೆದವರಲ್ಲ. ಶ್ರೀರಾಜರಾಜೇಶ್ವರತೀರ್ಥರು ಚಿಕ್ಕವಯಸ್ಸಿನಲ್ಲೇ ಹರಿಪಾದವನ್ನು ಸೇರಿದವರು. ಆ ಕಾಲದಲ್ಲಿ ಅವರ ಗುರುಗಳಾದ ಶ್ರೀ ವಿದ್ಯಾಮೂರ್ತಿತೀರ್ಥರು ಇದ್ದರು. ಆದ್ದರಿಂದ ಶ್ರೀರಾಜರಾಜೇಶ್ವರ ತೀರ್ಥರ ಕಾಲಾನಂತರದಲ್ಲಿ ಶಿಷ್ಯನ ಅಗಲುವಿಕೆಯಿಂದ ಅತ್ಯಂತ ದುಃಖಿತರಾದ ಶ್ರೀವಿದ್ಯಾಮೂರ್ತಿತೀರ್ಥರೇ ಇನ್ನೋರ್ವ ವಿದ್ವಾಂಸರಿಗೆ ಆಶ್ರಮವನ್ನು ನೀಡಿದರು. ಅವರೇ ಶ್ರೀ ಶ್ರೀನಿಧಿ ತೀರ್ಥರು. ಗುರುಗಳ ಅನುಗ್ರಹದಿಂದ ವಿದ್ಯಾಪರಿಣತಿಯನ್ನು ಪಡೆದವರು, ನಿರಂತರ ಅಧ್ಯಯನಶೀಲರಾಗಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಂಡವರು. ಸಕಲತೀರ್ಥಕ್ಷೇತ್ರವನ್ನು ಸಂದರ್ಶಿಸಿದವರು. ತಮ್ಮ ಗುರುಗಳ ಕಾಲಾನಂತರ ಹದಿನೆಂಟು ವರ್ಷಗಳ ಕಾಲ ಶ್ರೀರಾಮಚಂದ್ರನನ್ನು ಅರ್ಚಿಸಿ ಪೀಠಾಧಿಪತಿಗಳಾಗಿದ್ದು ಶಾಲಿವಾಹನ ಶಕ ೧೩೧೨ (ಕ್ರಿ.ಶ-೧೩೮೯) ಶುಕ್ಲ ಸಂವತ್ಸರದ ಆಷಾಢ ಶುದ್ಧ ಷಷ್ಠಿಯಂದು ಜಗನ್ನಾಥಪುರಿಯಲ್ಲಿ ಜಗದೊಡೆಯನ ಪಾದವನ್ನು ಸೇರಿದರು.

Shri Shrinidhi Teertha is the seventh seer in the lineage of Palimaru Matha. Although he is next in line to Shri Rajarajeshwara Teertha, he didn't receive initiation into sainthood by him. Shri Rajarajeshwara Teertha attained haripada at a young age. At the time, his guru Shri Vidyamurti Teertha was alive. Thus, with the departure of his disciple Shri Shrinidhi Teertha, a deeply saddened Shri Vidyamurti Teertha initiated another scholar into sainthood. That scholar was Shri Shrinidhi Teertha. Having gained expertise by the grace of his guru and engaging in continual study, he made his life meaningful. He visited all the holy places. After the departure of his guru, for a period of 18 years, he adorned the peetha and worshipped Shri Ramachandra. In Shalivahana shaka 1312 (1389 A.D.) Shukla samvatsara ashada shuddha shashti he attained the feet of the Lord of the universe at Jagannatha Puri.