ಪಲಿಮಾರು ಮಠದ ಗುರುಪರಂಪರೆಯಲ್ಲಿ ಇಪ್ಪತ್ತನೆಯವರು ಶ್ರೀರಾಮಭದ್ರತೀರ್ಥರು. ಶ್ರೀರಘೂತ್ತಮತೀರ್ಥರ ಕರಕಮಲಸಂಜಾತರಾದ ಇವರು ಗುರುಗಳಂತೆ ಅದ್ವಿತೀಯ ಶಾಸ್ತ್ರಪಂಡಿತರು. ದೇಶಸಂಚಾರಕಾಲದಲ್ಲಿ ಇವರ ಅಗಾಧವಾದ ಶಾಸ್ತ್ರಪಾಂಡಿತ್ಯವನ್ನು ಕಂಡು ರಾಜ-ಮಹಾರಾಜರುಗಳು ಸನ್ಮಾನವನ್ನು ಮಾಡಿದರು. ಇವರು ಹದಿನಾರು ಬಾರಿ ಸುಧಾಮಂಗಳವನ್ನು ಮಾಡಿದ್ದ ಮಹಾಜ್ಞಾನಿಗಳು. ಇವರ ಶಿಷ್ಯರಾದ ಶ್ರೀರಘುವರ್ಯತೀರ್ಥರು ಇವರ ಬಗ್ಗೆ ಬರೆಯುತ್ತಾ "ಇವರು ವಾದಕ್ಕೆ ನಿಂತರೆ ಪ್ರತಿವಾದಿಗಳು ಸಿಡಿಲೆರಗಿದಂತೆ ಕುಸಿದು ಬೀಳುತ್ತಿದ್ದರು" ಎಂಬುದಾಗಿ ವರ್ಣಿಸಿರುತ್ತಾರೆ.
ಶ್ರೀ ರಾಮಭದ್ರಗುರುವೇ ಶತ್ರುಪಕ್ಷಾದಭೀರವೇ |
ದುರ್ವಾದಿಭೂಭೃತ್ಸ್ವರವೇ ಸತ್ಕಲ್ಪತರವೇ ನಮಃ ||
ಇವರು ಹದಿನೆಂಟು ವರ್ಷಗಳ ಕಾಲ ಪೀಠವನ್ನಲಂಕರಿಸಿದವರು. ಶಾಲಿವಾಹನ ಶಕ ೧೫೭೯ (ಕ್ರಿ.ಶ-೧೬೫೭) ದುರ್ಮುಖ ಸಂವತ್ಸರದ ಮಾಘ ಶುಕ್ಲ ಪಂಚಮಿಯಂದು ಪಲಿಮಾರಿನಲ್ಲಿ ಶ್ರೀವೇದವ್ಯಾಸದೇವರ ಪಾದವನ್ನು ಸೇರಿದರು.
The twentieth seer in the lineage of Palimaru Matha is Shri Ramabhadra Teertha. Mentored by Shri Raghuttama Teertha, like his guru, he was a matchless scholar. While touring the country, kings and emperors felicitated him for his unfathomable erudition in the treatises. He is an eminent seer who performed Sudhamangala 16 times. His student Shri Raghuvarya Teertha describes him writing thus, "If he stands up for arguments, opponents would crash down as if they were struck by a thunder bolt."
Śrī rāmabhadraguruvē śatrupakṣādabhīravē |
durvādibhūbhr̥tsvaravē satkalpataravē namaḥ ||
He adorned the peeta for 18 years. In Shalivahana shaka 1579 (1657 A.D.) Durmukhi samvatsara magha shukla panchami, he attained the lotus feet of Shri Vedavyasa at Palimaru.