Skip to main content
x

19. ಶ್ರೀ ರಘೂತ್ತಮ ತೀರ್ಥರು

ಮಧ್ವಸಮಾಜ ಕಂಡ ಅಪ್ರತಿಮಪಂಡಿತರು ಶ್ರೀ ರಘೂತ್ತಮತೀರ್ಥರು ಪಲಿಮಾರುಮಠದ ಪರಂಪರೆಯ ಹತ್ತೊಂಭತ್ತನೆಯ ಯತಿಶ್ರೇಷ್ಠರು.  ಆಸೇತುಹಿಮಾಚಲದ ತೀರ್ಥಯಾತ್ರೆಯನ್ನುraghoottama-teertharu_0.jpg ಮೂರು ಬಾರಿ ಮಾಡಿದ ಮಹಾನ್ ಸಾಧಕರು. ದೇಶದಾದ್ಯಂತ ಸಂಚಾರವನ್ನು ಮಾಡಿ ಅಲ್ಲಲ್ಲಿ ಪಂಡಿತರನ್ನು ಆಹ್ವಾನಿಸಿ, ತನ್ನ ವಾದದ ಬಲದಿಂದ ಪ್ರತಿವಾದಿಗಳನ್ನು ಸೋಲಿಸಿ, ಒಲಿಸಿ, ಸಿದ್ಧಾಂತವನ್ನು ಮಂಡನೆ ಮಾಡುವ ಅಪೂರ್ವವಾದ ಪಾಂಡಿತ್ಯವನ್ನು ಸಂಪಾದನೆ ಮಾಡಿದ್ದವರು. ತಮ್ಮ ಶಿಷ್ಯರಾದ ಶ್ರೀ ರಾಮಭದ್ರತೀರ್ಥರಿಗಷ್ಟೇ ಅಲ್ಲದೇ ಪ್ರಶಿಷ್ಯರಾದ ಶ್ರೀರಘುವರ್ಯತೀರ್ಥರಿಗೆ ತಾವೇ ಸ್ವತಃ ಪಾಠವನ್ನು ಹೇಳಿ ಶಾಸ್ತ್ರಕೋವಿದರನ್ನಾಗಿಸಿದ ಕೀರ್ತಿ ಶ್ರೀ ರಘೂತ್ತಮತೀರ್ಥರಿಗೆ ಸಲ್ಲುವಂತದ್ದು. ಏಕಕಾಲದಲ್ಲಿ ಮೂವರು ಮಹಾನ್ ವಾದಿಸಿಂಹಗಳನ್ನು ತನ್ನ ಸಿಂಹಾಸನದಲ್ಲಿ ಅಲಂಕರಿಸಿಕೊಂಡ ಭಾಗ್ಯ ಪಲಿಮಾರುಮಠದ್ದು.   ಹಿಂದಿನ ಯತಿಶ್ರೇಷ್ಠರ ದೂರಾಲೋಚನೆ ಎಷ್ಟು ಚೆನ್ನಾಗಿತ್ತು ಎನ್ನುವುದಕ್ಕೆ ಈ ಮೂವರು ಯತಿಗಳ ಚರಿತ್ರೆ ಸಾಕ್ಷಿಯಾಗಬಲ್ಲದು.

ಗುರುಗಳು ಶಿಷ್ಯನಿಗೆ ಪಾಠವನ್ನು ಹೇಳಿ ಸಿದ್ಧಪಡಿಸುತ್ತಿದ್ದರು.  ಶಿಷ್ಯರಾದವರ ಅಧ್ಯಯನ ಮುಗಿಯುವ ವೇಳೆಗೆ ಗುರುಗಳಿಗೆ ಸಾಮಾನ್ಯವಾಗಿ ವಯಸ್ಸಾಗಿರುತ್ತಿತ್ತು. ಸಂಚಾರಮಾಡುವ ವಯಸ್ಸು ಮೀರುತ್ತಿತ್ತು. ಶಿಷ್ಯನನ್ನು ಸಂಚಾರಕ್ಕೆ ಕಳುಹಿಸಿ ತಾನು ಮಠದಲ್ಲೇ  ಜಪ-ಪೂಜಾದಿಗಳನ್ನು ಮಾಡಿಕೊಂಡು ಇರುತ್ತಿದ್ದರು.   ಆ ಸಂದರ್ಭದಲ್ಲಿ ಶಿಷ್ಯನಿಂದ ಇನ್ನೊಬ್ಬ ಶಿಷ್ಯನನ್ನು ಸ್ವೀಕರಿಸಿ ಆ ಪ್ರಶಿಷ್ಯನಿಗೆ ಈ ಪರಮಗುರುಗಳು ಮಠದಲ್ಲೇ ಪಾಠಹೇಳುತ್ತಿದ್ದರು. ತನ್ನಲ್ಲಿರುವ ವಿದ್ಯೆ ಮಾತ್ರವಲ್ಲದೇ ಅನುಭವಗಳನ್ನು ಧಾರೆಯೆರೆಯುತ್ತಿದ್ದರು.

ಯತಿಗಳು ಸಂಚಾರ ಮಾಡುವುದು, ತತ್ವಪ್ರಚಾರ ಮಾಡುವುದು ಎಷ್ಟು ಮುಖ್ಯವೋ ವಿದ್ಯಾಪರಂಪರೆಯನ್ನು ಉಳಿಸಿ ಬೆಳೆಸುವುದೂ ಕೂಡಾ ಅಷ್ಟೇ ಮುಖ್ಯ.  ಸಂಚಾರ ಮಾಡುತ್ತಾ ಪಾಠವನ್ನು ಹೇಳುವುದು ಸ್ವಲ್ಪ ಕಷ್ಟವೇ ಸರಿ.  ಹಾಗೆಂದು ಸಂಚಾರವನ್ನು ಬಿಡುವ ಹಾಗಿಲ್ಲ. ಬಿಟ್ಟರೆ ತತ್ವಪ್ರಚಾರವಾಗುವುದಿಲ್ಲ.   ಪಾಠವನ್ನೂ ಬಿಡುವ ಹಾಗಿಲ್ಲ.  ಬಿಟ್ಟರೆ ಅಧ್ಯಯನಪರಂಪರೆ ನಿಂತು ಹೊಗುತ್ತದೆ.  ಈ ಸಮಸ್ಯೆಗೆ ಪರಿಹಾರವೆಂಬಂತೆ ಈ ಮೂರು ಯತಿಗಳ ಜೀವನಕ್ರಮವಿತ್ತು. ಅತ್ಯಂತಸುಂದರವಾದ ಅನುಕರಣೀಯವಾದ ಜೀವನಕ್ರಮ.  
 
ಮೂವರು ಯತಿಗಳು ಏಕಕಾಲದಲ್ಲಿ ಮಠದಲ್ಲಿದ್ದರೆ ಮಧ್ಯದ ಯತಿಗಳು ಅಧ್ಯಯನ ಮುಗಿಸಿ ಸಂಚಾರಮಾಡುತ್ತಿದ್ದರು .  ಪರಮಗುರುಗಳು ಮಠದಲ್ಲೇ ಪ್ರಶಿಷ್ಯನಿಗೆ ಪಾಠ ಹೇಳುತ್ತಿದ್ದರು.  ಪ್ರಶಿಷ್ಯನ ಅಧ್ಯಯನವೂ ಸಾಂಗವಾಗಿ ನೆರವೇರುತ್ತಿತ್ತು.  ವಯಸ್ಸಾದ ಪರಮಗುರುಗಳಿಗೆ ಪೂಜಾದಿಗಳಿಗೆ ಸಹಾಯಮಾಡಿದ ಹಾಗೆಯೂ ಆಗುತ್ತಿತ್ತು. ಒಟ್ಟಿನಲ್ಲಿ ಈ ಕ್ರಮದಿಂದ ಯತಿಗಳಾದವರು ತಮ್ಮ ಧರ್ಮವನ್ನು ಪೂರ್ಣಪ್ರಮಾಣದಲ್ಲಿ ಆಚರಿಸಿದ ಹಾಗೆ ಆಗುತ್ತಿತ್ತು. ಇಂತಹ ಮಹತ್ತರವಾದ ಆಲೋಚನೆಯಿಂದ ಸಾರ್ಥಕವಾದ ಜೀವನವನ್ನು ನಡೆಸಿದವರು ಈ ಮೂವರು ಮಹಾನ್ ಯತಿಗಳು.  ಅಂತಹ ಯತಿಗಳನ್ನು ಕಂಡ ಮಾಧ್ವಪರಂಪರೆ ನಿಜವಾಗಿಯೂ ಧನ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗೆ ಶ್ರೀ ರಘೂತ್ತಮತೀರ್ಥರು ತಮ್ಮ ಪ್ರಶಿಷ್ಯರಾದ ಶ್ರೀರಘುವರ್ಯತೀರ್ಥರಿಗೂ ಕೂಡಾ ಸಕಲಶಾಸ್ತ್ರವಿದ್ಯೆಯನ್ನು ಧಾರೆಯೆರೆದು ವಿದ್ಯಾನಿಧಿಯನ್ನಾಗಿ ರೂಪಿಸಿದರು. ಶ್ರೀ ರಘುವರ್ಯತೀರ್ಥರಿಗೂ ಪರಮಗುರುಗಳ ಮೇಲೆ ಅಷ್ಟೇ ಪ್ರೀತಿಯಿತ್ತು.  ಇವರ ಅಂತಿಮದಿನದಂದು ಸಮೀಪದಲ್ಲಿದ್ದಂತಹ ಪ್ರಶಿಷ್ಯರಾದ ಶ್ರೀರಘುವರ್ಯತೀರ್ಥರು ಶ್ರೀರಘೂತ್ತಮತೀರ್ಥರು ಯಾವ ರೀತಿಯಾಗಿ ಪ್ರಾಣೋತ್ಕ್ರಮಣವನ್ನು ಮಾಡಿದರು, ಅವರ ಅಂತಿಮದಿನದ ದಿನಚರಿ ಹೇಗಿತ್ತು ಎನ್ನುವುದನ್ನು ಎಂಟು ಶ್ಲೋಕಗಳಲ್ಲಿ ಬಹಳ ಸ್ವಾರಸ್ಯವಾಗಿ ಮನಮುಟ್ಟುವಂತೆ ನಿರೂಪಿಸಿದ್ದಾರೆ.

ಪ್ರಾಣೋತ್ಕ್ರಮಣ ಮಾಡುವುದೆಂಬುದಾಗಿ ತೀರ್ಮಾನ ಮಾಡಿದಂತಹ ಶ್ರೀರಘೂತ್ತಮತೀರ್ಥರು ಶಿಷ್ಯ-ಪ್ರಶಿಷ್ಯರಾದ ಯತಿಗಳಿಗೆ ತಮ್ಮ ಕರ್ತವ್ಯವನ್ನು ಉಪದೇಶಿಸಿದರು. ಶಾಸ್ತ್ರವಿಧಿಯಂತೆ ಸ್ನಾನವನ್ನು ಮಾಡಿ, ಎಲ್ಲಾ ಮಂತ್ರಗಳ ಜಪವನ್ನು ಮಾಡಿ, ಶ್ರೀಮಧ್ವಾಚಾರ್ಯರ ಕರಕಮಲಪೂಜಿತನಾದ ರಘುಕುಲತಿಲಕ ಶ್ರೀರಾಮಚಂದ್ರನನ್ನು ಭಕ್ತಿಯಿಂದ ಅರ್ಚಿಸಿ, ಶ್ರೀಹರಿಯ ಪ್ರಸಾದವನ್ನು ಸ್ವೀಕರಿಸಿ ಆಚಮನವನ್ನು ಮಾಡಿ, ಶಿಷ್ಯಜನರಿಗೆ ತನ್ನ ವೃಂದಾವನಪ್ರವೇಶಕ್ಕೆ ಸಿದ್ಧತೆ ಮಾಡಲು ಆದೇಶಿಸಿದರು.

ಉತ್ತಮರನ್ನೂ, ದೇವತೆಗಳನ್ನೂ, ತತ್ವಜ್ಞರನ್ನೂ, ಸರ್ವರಿಗೂ ಆಶ್ರಯನಾದ ಶ್ರೀ ರಾಮಚಂದ್ರನನ್ನು ಹಾಗೂ ವೇದವ್ಯಾಸರನ್ನು ಸ್ಮರಿಸುವಂತೆ ತನ್ನ ಬಳಿ ಬಂದ ಸಜ್ಜನರಿಗೆ ಹೇಳಿದರು. ಕೈ ಜೋಡಿಸಿ ಸ್ತೋತ್ರಗಳನ್ನು ಶ್ರವಣ ಮಾಡುತ್ತಾ ತನ್ನ ಮಾತಿನಂತೆ ಶಿಷ್ಯ-ಪ್ರಶಿಷ್ಯರು ಅರ್ಪಿಸಿದ ತೀರ್ಥವನ್ನೂ ಗಂಗಾಜಲವನ್ನೂ ಸಂತೋಷದಿಂದ ಸೇವಿಸಿದರು. ಹರಿಯನ್ನು ಧ್ಯಾನಿಸುತ್ತಾ ವಂಶಧರನ ಭುಜದ ಮೇಲೆ ತಮ್ಮ ಕೈಗಳನ್ನಿಟ್ಟು, ದುಃಖಿಸುತ್ತಿರುವ ಸುಜನರನ್ನು ಕೈ ಎತ್ತಿ ತಡೆದರು.  

ಸಾಯಂಕಾಲದ ತರ್ಪಣಗಳನ್ನು ಪೂರೈಸಿ, ಶ್ರೀರಘೂತ್ತಮತೀರ್ಥರು ತಮ್ಮ ಶಿಷ್ಯನ ಮೂಲಕ ಪ್ರಶಿಷ್ಯರಿಗೆ ಶ್ರೀಹರಿಯ ಪೂಜೆ ಬೇಗ ನಡೆಯಲೆಂದು ಆದೇಶಿಸಿದರು. ಪೂಜೆಯ ನಂತರ ಸಚ್ಛಾಸ್ತ್ರಜ್ಞರಾದ ಗುರುಗಳು ಕುಂದಿದ ಧ್ವನಿಯಿಂದ ತನ್ನ ಬಳಿಯಿದ್ದ ಶಿಷ್ಯಜನರಲ್ಲಿ ಶ್ರೀಹರಿನಾಮ ಕೀರ್ತನೆಯನ್ನು ಮಾಡಬೇಕೆಂದು ಹೇಳಿದರು. ಶುಭ್ರವಾದ ಊರ್ಧ್ವಪುಂಡ್ರಗಳಿಂದ ಅಂಕಿತರಾಗಿ, ವೀರಾಸನದಲ್ಲಿ ಆಸೀನರಾಗಿ, ಶ್ರೀಹರಿನಾಮಕೀರ್ತನೆಯನ್ನು ಕೇಳುತ್ತಾ ಪುನಃ ಲಕ್ಷ್ಮೀಪತಿಯ ಪಾದೋದಕವನ್ನು ಸೇವಿಸಿದರು. ಶ್ರೀರಾಮನಿಗೆ ಅರ್ಪಿಸಿದ ಗಂಧ, ತುಳಸೀಮಾಲೆಗಳನ್ನು ಧರಿಸಿ ಮೊದಲು ನಡೆಸಿದ ಸತ್ಕರ್ಮಗಳಿಂದ, ಹರಿಧ್ಯಾನಾದಿ ಯೋಗಗಳಿಂದ, ದುಷ್ಕರ್ಮವೆಂಬ ರೋಗಕ್ಕೆ ಔಷಧವೆನಿಸಿದ ಶ್ರೀನರಸಿಂಹನಾಮವನ್ನು ಹೇಳುತ್ತಾ ಯೋಗಿಯಾದ ಶ್ರೀರಘೂತ್ತಮತೀರ್ಥರು ಪರಿಧಾವಿ ಸಂವತ್ಸರದಲ್ಲಿ ಕನ್ಯಾರಾಶಿಯಲ್ಲಿ ಸೂರ್ಯನಿರಲು ಶನಿವಾರದಂದು ಪ್ರೀತಿಯೋಗದಲ್ಲಿ ಶುಕ್ಲಪಕ್ಷದ ಪಂಚಮೀ ತಿಥಿಯಂದು ಅನುರಾಧಾ ನಕ್ಷತ್ರವಿರಲು ಶ್ರೀರಾಮನ ಸ್ಮರಣೆಮಾಡುತ್ತಾ ರಾತ್ರಿಯ ಕೊನೆಯಲ್ಲಿ ಪಲಿಮಾರಿನಲ್ಲಿ ಶ್ರೀ ಹರಿಯ ಪಾದವನ್ನು ಸೇರಿದರು. ನಿತ್ಯವೂ ಸ್ನಾನ-ಜಪಾದಿಕರ್ಮಗಳನ್ನು ಆಚರಿಸುತ್ತಾ, ಶಾಸ್ತ್ರವ್ಯಾಖ್ಯಾನ ಮಾಡುತ್ತಾ ಕಾಮಾದಿ ದೋಷಗಳನ್ನು ತ್ಯಜಿಸಿದ, ಸೀತಾರಾಮನ ಪಾದಾರ್ಚನೆಯಲ್ಲಿ ಮನಸ್ಸನ್ನು ನೆಟ್ಟು, ಪರಿಶುದ್ಧರಾದ, ದಯಾಸಾಗರರಾದ, ಶ್ರೀರಘೂತ್ತಮ ತೀರ್ಥರನ್ನು ಜ್ಞಾನಾದಿ ಶ್ರೇಯಸ್ಸಿಗಾಗಿ ವಂದಿಸುವೆ. ಇದು ಶ್ರೀರಘುವರ್ಯತೀರ್ಥರು ಶ್ರೀರಘೂತ್ತಮತೀರ್ಥರ ಅಂತಿಮದಿನದ ಚರ್ಯೆಯ ಬಗ್ಗೆ ಶ್ಲೋಕಾಷ್ಟಕದಲ್ಲಿ ನೀಡಿದ ವಿವರಣೆ.

ಚರಮ ಶ್ಲೋಕ :
ದೂಷಿತಾಶೇಷದುಃಶಾಸ್ತ್ರಾನ್ ಶಿಷ್ಯತಚ್ಛಿಷ್ಯಶಿಕ್ಷಕಾನ್ |
ರಘೂತ್ತಮಾನ್ ಗುರೂತ್ತಂಸಾನ್ ಶ್ರಿತೋ ವಿದ್ವತ್ತಮೋತ್ತಮಾನ್ ||

The unparalleled scholar that the madhva community of the time witnessed, Shri Raghuttama Teertha was the nineteenth noble seer of the Palimaru Matha lineage.  He was a great seeker who went on a pilgrimage from Rameshwaram to the Himalayas thrice. He journeyed across the country,inviting scholars for debates, defeating opponents with the might of his arguments, conciliating, establishing the philosophy. He had earned such unique erudition.

Credit goes to Shri Raghuttama Teertha for besides teaching his own disciple Shri Ramabhadra Teertha, he also taught his disciple's pupil - Shri Raghuvarya Teertha and made them well versed in the doctrines. Palimaru Matha had the fortune of embellishing its throne with three able roaring debaters at the same time. The story of these three seers exemplifies how good the foresightedness of the noble seers of the yore was. The guru used to teach his disciple and prepare him. Usually, the guru would be aged by the time his disciple completes his study. The disciple would be sent on tour and he would stay at the matha engaging in prayer and worship. At that time, he used to accept a prashishya (student of his disciple) and would teach him at the matha itself in the capacity of paramaguru (guru of one's guru). He not only showered his knowledge but also experiences.

It is just as important to maintain the education tradition and develop it as it is for the seers to tour and  promote the tatva philosophy.It is a little tedious to teach as one tours. However, that cannot become a reason to stop touring. That would hinder the propagation of the tatva philosophy.Teaching too cannot be abandoned.That would hinder the education system. The way of life of these three seers seemed like a solution to this problem. An extremely beautiful and exemplary lifestyle.

In the event of all the three seers being present at the matha at the same time, the median seer would complete his study and proceed to touring.The paramaguru would teach the prashishya at the matha itself. This would enable the prashishya to peruse his study well. He would also be able to assist his elderly paramaguru in his worship and other chores. Overall, in this manner the seers were able to adhere to their dharma in full measure. With such progidious thinking, these three noble seers lead a meaningful life. There is no second thought about the good fortune of the madhva community that has witnessed such eminent seers.

Thus, Shri Raghuttama Teertha showered his knowledge in all the treatises upon his prashishya Shri Raghuvarya Teertha too and groomed him into a reservoir of knowledge.

Shri Raghuvarya Teertha too adored his paramaguru just as much. He stayed by the side of Shri Raghuttama Teertha on his final day and has rendered an interesting and touching account of his routine on the final day and the manner in which he breathed his last in Shlokashtaka (eight verses).

Aware of his departure, Shri Raghuttama Teertha instructed the respective duties to his disciple and disciple of his disciple (prashishya). He performed ablution as prescribed in the shastras, recited all the mantras, offered devout worship to Raghukulatilaka Shri Ramachandra who was worshipped by the lotus of hands of Shri Madhvacharya, accepted the food offered to the Lord followed by sipping water from the palm for Achamana (purification)and then ordered his disciples to make arrangements for him to enter the vrindavana.

He told all the virtuous people who were by his side to bring to mind the sages, deities, philosophers, the refuge to everyone Shri Ramachandra and Vedavyasa. As instructed to his disciples, they offered him holy water and Gangajala which he sipped with joy as he listened to hymns. Meditating upon Shri Hari, he placed his hands upon the shoulder of his successor and consoled the mournful people by raising his hand.

He completed the evening tarpana and ordered his prashishya through his disciple to offer worship to Shri Hari quickly. After the worship, the learned guru in a meek voice told the disciples around him to sing hymns of Shri Hari. Marked with fresh urdhvapundra, postured in veeraasana, listening to hymns of Shri Hari, he then sipped the paadodaka of Lakshmipati. He adorned the Gandha Prasada and tulasi garland offered to Shri Rama. Owing to the virtuous deeds he had previously performed, meditation upon Shri Hari and other such oblations, the mystic Shri Raghuttama Teertha whilst chanting Shri Narasimha nama that is considered to be the medicine for bad karma and remembering Shri Rama, attained the lotus feet of the Lord at Palimaru in the final moments of the night of Paridhaavi samvatsara while the sun was in kanya raashi on saturday during preeti yoga shukla paksha panchami thithi anuradha nakshatra. Performing ritualistic cleansing and chants every day, expounding the treatises, renouncing the imperfections, focusing the mind upon worshipping the lotus feet of Seeta Rama, the pure ocean of compassion - Shri Raghuttama Teertha, I hail his exemplary knowledge. Saying thus, Shri Raghuvarya Teertha extolled Shri Raghttama Teertha in the Shlokashtaka hymn describing his activities on the final day.

Charama Shloka

दूषिताशेषदुःशास्त्रान् शिष्यतच्छिष्यशिक्षकान् ।
रघूत्तमान् गुरूत्तंसान् श्रितो विद्वत्तमोत्तमान् ॥

dooshitashesha duhshastraan shishyatachishya shikshakaan |
raghoottaman guruttamsaan shrito vidvattamottamaan ||