Skip to main content
x

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು

ನೀನು ವಿಶ್ವದ ಒಡತಿಯಾಗಿ ಇಡಿಯ ವಿಶ್ವವನ್ನು ಪಾಲಿಸುತ್ತಿರುವಿ. ವಿಶ್ವನಾಮಕ ವಿಷ್ಣುವನ್ನು ಸ್ವಾಮಿಯನ್ನಾಗಿಸಿಕೊಂಡು ವಿಶ್ವವನ್ನು ಹೊರುತ್ತಿರುವೆ. ವಿಶ್ವದ ಒಡೆತನ ಪಡೆದಿರುವ ಬ್ರಹ್ಮರುದ್ರಾದಿಗಳೆಲ್ಲರೂ ನಿರಂತರ ನಮಸ್ಕರಿಸುವರು ನಿನಗೆ. ನಿನ್ನನ್ನು ಭಕ್ತಿಯಿಂದ ಪೂಜಿಸುವರು ವಿಶ್ವಕ್ಕೆ ಆಶ್ರಯ ನೀಡುವ ಸಾಮರ್ಥ್ಯ ಪಡೆಯುವರು.

ವಿಶ್ವೇಶ್ವರಿ ತ್ವಂ ಪರಿಪಾಸಿ ವಿಶ್ವಂ.
ವಿಶ್ವಾತ್ಮಿಕಾ ಧಾರಯಸೀಹ ವಿಶ್ವಂ.
ವಿಶ್ವೇಶವಂದ್ಯಾ ಭವತೀ ಭವಂತಿ.
ವಿಶ್ವಾಶ್ರಯಾ ಯೇ ತ್ವಯಿ ಭಕ್ತಿನಮ್ರಾಃ
– (ಮಾರ್ಕಂಡೇಯ ಪುರಾಣ)

ವಿಷ್ಣುವಿನ ಜೊತೆಗೆಯೇ ಆರಾಧಿಸಿದಾಗ ಮಾತ್ರವೇ ಲಕ್ಷ್ಮೀದೇವಿ ಸಂತಸಪಡುವಳು. “ವಿಷ್ಣುನಾ ಸಹಿತಾ ಧ್ಯಾತಾ ಸಾ ಹಿ ತುಷ್ಟಿಂ ಪರಾಂ ವ್ರಜೇತ್” ವಿಷ್ಣುವಿನ ಮೇಲೆ ಭಕ್ತಿಯಿಲ್ಲದೆ, ಅವನ ಬಗೆಗೆ ಸರಿಯಾಗಿ ತಿಳಿಯದೆ, ಅವಳ ಪೂಜೆ ನಡೆಸಿದರೆ ವಿಷ್ಣುಪ್ರಿಯೆ ಎನಿಸಿದ ಲಕ್ಷ್ಮೀದೇವಿ ಅಂತಹವರನ್ನು ಶಪಿಸುವಳು.

ಅವಿಷ್ಣುಜ್ಞೈಃ ಅತದ್ಭಕ್ತೈಃ ತದುಪಾಸಾವಿವರ್ಜಿತೈಃ.
ಶಪೇದುಪಾಸಿತಾಪ್ಯೇಷಾ ಶ್ರೀಸ್ತಾನ್ ತದ್ಧರಿತತ್ವವಿತ್

ಆಚಾರ್ಯರು ನೀಡಿದ ಪರಮಶ್ರುತಿಯ ಮಾತುಗಳ ಎಚ್ಚರಿಕೆಯನ್ನು ನೆನಪಲ್ಲಿಟ್ಟುಕೊಂಡು ದೇವಸಹಿತನಾಗಿಯೇ ದೇವಿಯ ಆರಾಧನೆ ನಡೆಯಲಿ.

ನವರಾತ್ರಿಯ ಶುಭಾಶಯಗಳು