Skip to main content
x

ದಾನ ಮಾಡದವನನ್ನು ಹಾಗೂ ತಪಸ್ಸು ಮಾಡದವನನ್ನು ಏನು ಮಾಡಬೇಕು?

ಸಂಪತ್ತಿದ್ದೂ ದಾನ ಮಾಡದ ಪಿಟ್ಟಾಸಿಯಿಂದ ಸಮಾಜಕ್ಕೇನೂ ಉಪಾಯೋಗವಿಲ್ಲ. ಹಾಗಾಗಿ ಅವನಿರುವುದಕ್ಕಿಂತ ಇಲ್ಲದಿರುವುದೇ ವಾಸಿ. ದಾರಿದ್ರ್ಯ ಎನ್ನುವುದು ಹಲವು ಬಗೆಯದ್ದು.

ಬದುಕು ಕೃಷ್ಣಾರ್ಪಣಗೊಳ್ಳಲಿ.

ಕರ್ಮ ಎನ್ನುವುದು ದೇವರ ಎಚ್ಚರದಲ್ಲಿ ಅರ್ಥಾತ್ ಜ್ಞಾನದಲ್ಲಿ ಕೊನೆಗೊಳ್ಳಬೇಕು. ಕರ್ಮವು ಕರ್ಮದಲ್ಲೇ ಪರ್ಯವಸಾನಗೊಂಡರೆ ಅದು ಅಪಾಯಕಾರಿ

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು

ನೀನು ವಿಶ್ವದ ಒಡತಿಯಾಗಿ ಇಡಿಯ ವಿಶ್ವವನ್ನು ಪಾಲಿಸುತ್ತಿರುವಿ. ವಿಶ್ವನಾಮಕ ವಿಷ್ಣುವನ್ನು ಸ್ವಾಮಿಯನ್ನಾಗಿಸಿಕೊಂಡು ವಿಶ್ವವನ್ನು ಹೊರುತ್ತಿರುವೆ. ವಿಶ್ವದ ಒಡೆತನ ಪಡೆದಿರುವ ಬ್ರಹ್ಮರುದ್ರಾದಿಗಳೆಲ್ಲರೂ ನಿರಂತರ ನಮಸ್ಕರಿಸುವರು ನಿನಗೆ. ನಿನ್ನನ್ನು ಭಕ್ತಿಯಿಂದ ಪೂಜಿಸುವರು ವಿಶ್ವಕ್ಕೆ ಆಶ್ರಯ ನೀಡುವ ಸಾಮರ್ಥ್ಯ ಪಡೆಯುವರು.

ವಿಶ್ವೇಶ್ವರಿ ತ್ವಂ ಪರಿಪಾಸಿ ವಿಶ್ವಂ.
ವಿಶ್ವಾತ್ಮಿಕಾ ಧಾರಯಸೀಹ ವಿಶ್ವಂ.
ವಿಶ್ವೇಶವಂದ್ಯಾ ಭವತೀ ಭವಂತಿ.
ವಿಶ್ವಾಶ್ರಯಾ ಯೇ ತ್ವಯಿ ಭಕ್ತಿನಮ್ರಾಃ
– (ಮಾರ್ಕಂಡೇಯ ಪುರಾಣ)

ಪತಿಯ ಬಿಟ್ಟು ತನ್ನ ಪೂಜಿಸಲು ದುರ್ಗೆಯೊಪ್ಪಳು

ನೀನು ವಿಶ್ವದ ಒಡತಿಯಾಗಿ ಇಡಿಯ ವಿಶ್ವವನ್ನು ಪಾಲಿಸುತ್ತಿರುವಿ. ವಿಶ್ವನಾಮಕ ವಿಷ್ಣುವನ್ನು ಸ್ವಾಮಿಯನ್ನಾಗಿಸಿಕೊಂಡು ವಿಶ್ವವನ್ನು ಹೊರುತ್ತಿರುವೆ. ವಿಶ್ವದ ಒಡೆತನ ಪಡೆದಿರುವ ಬ್ರಹ್ಮರುದ್ರಾದಿಗಳೆಲ್ಲರೂ ನಿರಂತರ ನಮಸ್ಕರಿಸುವರು ನಿನಗೆ. ನಿನ್ನನ್ನು ಭಕ್ತಿಯಿಂದ ಪೂಜಿಸುವರು ವಿಶ್ವಕ್ಕೆ ಆಶ್ರಯ ನೀಡುವ ಸಾಮರ್ಥ್ಯ ಪಡೆಯುವರು.

ವಿಶ್ವೇಶ್ವರಿ ತ್ವಂ ಪರಿಪಾಸಿ ವಿಶ್ವಂ.
ವಿಶ್ವಾತ್ಮಿಕಾ ಧಾರಯಸೀಹ ವಿಶ್ವಂ.
ವಿಶ್ವೇಶವಂದ್ಯಾ ಭವತೀ ಭವಂತಿ.
ವಿಶ್ವಾಶ್ರಯಾ ಯೇ ತ್ವಯಿ ಭಕ್ತಿನಮ್ರಾಃ
– (ಮಾರ್ಕಂಡೇಯ ಪುರಾಣ)

ಶ್ರೀವಿದ್ಯಾಮಾನ್ಯರು ನಮ್ಮ ಮನೆಯ ಆಧ್ಯಾತ್ಮ ದೀಪವನ್ನು ಹಚ್ಚಿದವರು

ಪ್ರಸಿದ್ಧ ವಿದ್ವಾಂಸರಾದ ಶ್ರೀ ತಾಮ್ರಪರ್ಣೀ ರಾಘವೇಂದ್ರಾಚಾರ್ಯರ ಹರಿಗುರುಗಳ ಸೇವೆಯನ್ನು ಗಮನಿಸಿ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಸಂದರ್ಭದಲ್ಲಿ “ಪರವಿದ್ಯಾ ಪ್ರವೀಣ” ಎಂದು ಪ್ರಶಸ್ತಿ ನೀಡಿ ಸಂಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಹೇಳಿದ ಮಾತಿದು.

ವಸುದೇವರಾಗಬಲ್ಲೆವೆ?

ಶ್ರೀಕೃಷ್ಣನು ವಸುದೇವನ ಮನೆಯಲ್ಲಿ ಅವತರಿಸುವನು ಎನ್ನುವ ಚತುರ್ಮುಖನ ಮಾತನ್ನು ಭಾಗವತ ಉಲ್ಲೇಖಿಸಿದೆ. ವಸುದೇವಗೃಹೇ ಸಾಕ್ಷಾದ್ ಭಗವಾನ್ ಪುರುಷಃ ಪರಃ ಜನಿಷ್ಯತೇ ಎನ್ನುವುದಾಗಿ ಆ ಮಾತು. ವ್ಯಾಸರ ಈ ವಾಕ್ಯವನ್ನು ನೋಡಿದಾಗ ಸಹಜವಾಗಿಯೇ ಅರ್ಥವಾಗುವುದು ಗೃಹ ಎಂದರೆ ಮನೆ ಎನ್ನುವ ಅರ್ಥ. ವಸುದೇವನ ಮನೆಯಲ್ಲಿ ಕೃಷ್ಣಾವತಾರ ಎಂದು. ಇಷ್ಟೇ ಅಲ್ಲದೇ ‘ಗೃಹ ಶಬ್ದವನ್ನು ಮನೆಯನ್ನು ಮುನ್ನಡೆಸುವ ಮಡದಿಯಲ್ಲೂ ಪ್ರಯೋಗಿಸುವುದಿದೆ. ಗೃಹಿಣೀ ಗೃಹಮುಚ್ಯತೇ ಎನ್ನುವ ಪ್ರಾಚೀನರ ಮಾತೇ ಇದಕ್ಕೆ ಸಾಕ್ಷಿ. ಹಾಗಾಗಿ ವಸುದೇವನ ಗೃಹದಲ್ಲಿ ಅಂದರೆ ಅವನ ಮಡದಿಯಾದ ದೇವಕಿಯಲ್ಲಿ ಸಾಕ್ಷಾತ್ ಪರಮಪುರುಷ ಕೃಷ್ಣನಾಗಿ ಅವತರಿಸುತ್ತಾನೆ ಎನ್ನುವುದಾಗಿ ವ್ಯಾಸರ ಮಾತಿನ ಆಂತರ್ಯ.

ಕ್ಷಮಿಸುವ ಎಲ್ಲರೂ ದುರ್ಬಲರಲ್ಲ

ಲೇಖನ : ಕೃಷ್ಣಸಖ

ಕ್ಷಮೆ ನೀಡುವವರಲ್ಲಿ ಒಂದೇ ಒಂದು ದೋಷ. ಅದೇನೆಂದರೆ, “ಪ್ರಾಯಃ ಈತ ಕೈಲಾಗದವನಿರಬೇಕು ಅದಕ್ಕೆ ಎಲ್ಲವನ್ನು ಸಹಿಸಿಕೊಳ್ಳುತ್ತಾನೆ” ಎಂದು ಜನ ತಪ್ಪು ತಿಳಿಯುತ್ತಾರೆ ಎನ್ನುವುದು.

“ಏಕಃ ಕ್ಷಮವತಾಂ ದೋಷಃ ದ್ವಿತೀಯೋ ನೋಪಪದ್ಯತೇ. |
ಯದೇನಂ ಕ್ಷಮಯಾ ಯುಕ್ತಂ ಅಶಕ್ತಂ ಮನ್ಯತೇ ಜನಃ” ||
– ( ಭಾರತ-ವಿದುರನೀತಿ )

ಅದ್ವಿತೀಯ ಶ್ರೀಕೃಷ್ಣ ಪೂಜಾ ದ್ವಿತೀಯ ಪರ್ಯಾಯ – ಬಾಳೆ ಮುಹೂರ್ತ

ವಿತ್ರ ಭಾರತಾವನಿಯಲ್ಲಿ ವಿಶಿಷ್ಟಸ್ಥಾನವನ್ನು ಪಡೆದ ಕ್ಷೇತ್ರ – ಉಡುಪಿ. ಶ್ರೀಪರಶುರಾಮದೇವರಿಂದ ನಿರ್ಮಾಣಗೊಂಡ ಇಂದಿನ ಮಹರಾಷ್ಟ್ರದ ಕಲ್ಯಾಣದಿಂದ ಸಹ್ಯಾದ್ರಿತಪ್ಪಲಿನಲ್ಲಿ ಹಬ್ಬಿಕೊಂಡು ಕನ್ಯಾಕುಮಾರಿಯವರೆಗಿನ ಪಡುಗಡಲತಡಿಯ ಕ್ಷೇತ್ರಗಳಲ್ಲಿ ಪ್ರಧಾನವಾದುದು. ಎಂಟುನೂರು ವರ್ಷಗಳ ಹಿಂದೆ “ಶಿವಬೆಳ್ಳಿ” ಎಂದು ಕರೆಯಲ್ಪಟ್ಟಿತ್ತು. ಸಂಸ್ಕೃತದಲ್ಲಿ “ಶಿವರೂಪ್ಯ” ಎಂದು ಪ್ರಸಿದ್ಧವಾಗಿತ್ತು. ಶ್ರೀಮದ್ವಾದಿರಾಜ ಶ್ರೀಮಚ್ಚರಣರು ಉಲ್ಲೇಖಿಸಿದಂತೆ “ಮಹೇಶರಜತ” ಎಂದೂ ಪ್ರಸಿದ್ಧವಾಗಿತ್ತು.

Subscribe to Article